Englishहिन्दीമലയാളംதமிழ்తెలుగు

300ರನ್ ಕ್ಲಬ್ ಸೇರಿದ ಹರಿಣಗಳ ಸೇನಾನಿ ಆಮ್ಲ

Posted by:
Published: Monday, July 23, 2012, 11:50 [IST]
 

300ರನ್ ಕ್ಲಬ್ ಸೇರಿದ ಹರಿಣಗಳ ಸೇನಾನಿ ಆಮ್ಲ
 

ಲಂಡನ್, ಜು.23: ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಶಿಂ ಅಮ್ಲ ಔಟಾಗದೆ ತ್ರಿಶತಕ (311) ಮತ್ತು ಜಾಕ್ ಕಾಲಿಸ್ ಶತಕ (182) ನೆರವಿನಿಂದ ಅತಿಥೇಯ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2 ವಿಕೆಟ್‌ಗೆ 637 ರನ್‌ಗೆ ಪ್ರಥಮ ಇನಿಂಗ್ಸ್‌ನ್ನು ಡಿಕ್ಲೇರ್ ಮಾಡಿಕೊಂಡಿದೆ. ತ್ರಿಶತಕ ಹಾಗೂ ಅತಿ ಹೆಚ್ಚು ವೈಯಕ್ತಿಕ ರನ್ ಸಿಡಿಸಿದ ಆಮ್ಲ ಅವರನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹಾಡಿ ಹೊಗಳಿದೆ.

ಹಾಶಿಂ ಆಮ್ಲ ತ್ರಿಶತಕ ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಹಾಗೂ ವಿಶ್ವದ 26ನೆ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಎಬಿ ಡಿ'ವಿಲೆಯರ್ಸ್ ಅವರ 278 ರನ್ ಗಳ ದಾಖಲೆಯನ್ನು ಅಳಿಸಿದ ಆಮ್ಲ, 300ರ ಕ್ಲಬ್ ಸೇರಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಯುವ ಆಟಗಾರರು ಆಸಕ್ತಿ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಹಾಶಿಂ ಆಮ್ಲ ಅವರ ಈ ಆಟ ಹೊಸ ಹುರುಪು ನೀಡಲಿದೆ. ಹಾಶಿಂ ಆಮ್ಲ ಹಾಗೂ ಕಾಲಿಸ್ ಅವರ ಆಟದಿಂದ ಯುವ ಆಟಗಾರರು ಕಲಿಯುವುದು ಸಾಕಷ್ಟಿದೆ. ಮೈದಾನದ ಹೊರಗೂ ಹಾಶಿಂ ಆಮ್ಲ ಅವರ ನಡತೆ ಅನುಕರಣೀಯ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಬೋರ್ಡ್ ಹಂಗಾಮಿ ಸಿಇಒ ಜಾಕ್ವಿಸ್ ಫೌಲ್ ಅವರು ಹರ್ಷದಿಂದ ಹೇಳಿದ್ದಾರೆ.

ಈ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಪಾಲಿಗೆ ವಿಶೇಷವಾಗಿದೆ. ನಾಯಕ ಗ್ರಹಾಂ ಸ್ಮಿತ್ ಅವರು 100ನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು. ನಂತರ ಜಾಕ್ ಕಾಲಿಸ್ ಅವರು ತಮ್ಮ ಟೆಸ್ಟ್ ಜೀವನದ 43ನೇ ಶತಕ ಸಿಡಿಸಿದರು. ಸ್ಮಿತ್ ಹಾಗೂ ಗಿಬ್ಸ್ ಅವರು ಸಾಧಿಸಿದ್ದ ಮೂರು ಶತಕಗಳ ಜೊತೆಯಾಟವನ್ನು ಕೂಡಾ ಆಮ್ಲ ಹಾಗೂ ಕಾಲಿಸ್ ಜೋಡಿ ಸರಿಗಟ್ಟಿದೆ.

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೂರನೆ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 403 ರನ್ (ಅಮ್ಲ 183, ಕಾಲಿಸ್ 82) ಗಳಿಸಿದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮುಂದುವರಿಸಿ ಟೀ ವಿರಾಮದ ಹೊತ್ತಿಗೆ 189 ಓವರ್‌ಗಳಲ್ಲಿ 637 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಡಿಕ್ಲೇರ್ ಮಾಡಿತು. ಇದರೊಂದಿಗೆ ಇಂಗ್ಲೆಂಡ್ ವಿರುದ್ಧ 252 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ. [ಸಂಪೂರ್ಣ ಸ್ಕೋರ್ ಕಾರ್ಡ್ ನೋಡಿ]

3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಅಮ್ಲ ಮತ್ತು ಕಾಲಿಸ್ 101.5 ಓವರ್‌ಗಳಲ್ಲಿ 377 ರನ್‌ಗಳನ್ನು ಕಲೆ ಹಾಕಿದರು. ಇಂಗ್ಲೆಂಡ್‌ನ ಬೌಲರ್‌ಗಳು ಇಂದು 54 ಓವರ್‌ಗಳನ್ನು ಎಸೆದು 234 ರನ್‌ಗಳನ್ನು ಬಿಟ್ಟು ಕೊಟ್ಟರೂ ಒಂದು ವಿಕೆಟ್ ಕೀಳಲು ಸಾಧ್ಯವಾಗದೆ ಕೈ ಸುಟ್ಟುಕೊಂಡರು.

ರನ್ ಮಳೆ ಸುರಿಸಿದ ಅಮ್ಲ 515 ಎಸೆತಗಳಲ್ಲಿ 35 ಬೌಂಡರಿಗಳ ನೆರವಿನಲ್ಲಿ ತ್ರಿಶತಕ ಪೂರ್ಣಗೊಳಿಸಿದರು. ತನ್ನ 60ನೆ ಟೆಸ್ಟ್‌ನಲ್ಲಿ ಅಮ್ಲ ತ್ರಿಶತಕದ ಸಾಧನೆ ಮಾಡಿದರು. ಈ ಮೊದಲು ಅವರು 392 ಎಸೆತಗಳಲ್ಲಿ 23 ಬೌಂಡರಿಗಳ ನೆರವಿನಲ್ಲಿ ದ್ವಿಶತಕ ಸಿಡಿಸಿದ್ದರು. 29ರ ಹರೆಯದ ಅಮ್ಲ 14 ಶತಕ ಮತ್ತು 50 ಅರ್ಧಶತಕದ ದಾಖಲೆ ಹೊಂದಿದ್ದಾರೆ.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 385 ( ಮಾರ್ನೆ ಮಾರ್ಕೆಲ್ 72 ರನ್ನಿಗೆ 4) ಹಾಗೂ 102/4
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 637 / 2 ಡಿಕ್ಲೇರ್

English summary
South Africa's Hashim Amla Cricket became the first cricketer to score a triple ton and also registered the highest ever Test score for his country, as South Africa Cricket saluted the batsman for his double feat on Sunday.
ಅಭಿಪ್ರಾಯ ಬರೆಯಿರಿ