Englishहिन्दीമലയാളംதமிழ்తెలుగు

ಸಚಿನ್, ದ್ರಾವಿಡ್ ದಾಖಲೆ ಸರಿಗಟ್ಟಿದ ಕೊಹ್ಲಿ

Posted by:
Updated: Sunday, July 22, 2012, 16:15 [IST]
 

ಸಚಿನ್, ದ್ರಾವಿಡ್ ದಾಖಲೆ ಸರಿಗಟ್ಟಿದ ಕೊಹ್ಲಿ
 

ಹಂಬನ್ ಟೋಟಾ, ಜು.22: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಪ್ರಥಮ ಪಂದ್ಯ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ. ಗೆಲುವಿನ ರುವಾರಿಯಾದ ವಿರಾಟ್ ಕೊಹ್ಲಿ ಅದ್ಭುತ ಶತಕದ ಜೊತೆಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಮುಖ್ಯವಾಗಿ ಸಚಿನ್ ಹಾಗೂ ದ್ರಾವಿಡ್ ಅವರ ದಾಖಲೆ ಸರಿಗಟ್ಟಿದ್ದಾರೆ.

ಪ್ರಥಮ ಏಕದಿನ ಪಂದ್ಯದ ರೋಚಕ ಮುಖ್ಯಾಂಶ, ದಾಖಲೆ ಇಂತಿದೆ:

# ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ನಂತರ ಏಕದಿನ ಕ್ರಿಕೆಟ್ ನಲ್ಲಿ 5 ಇನ್ನಿಂಗ್ಸ್ ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ ಮೂರನೇ ಭಾರತೀಯ ಆಟಗಾರ ಎಂಬ ಸಾಧನೆ ವಿರಾಟ್ ಕೊಹ್ಲಿ ಮಾಡಿದ್ದಾರೆ. ತೆಂಡೂಲ್ಕರ್ 1994ರಲ್ಲಿ ಹಾಗೂ ರಾಹುಲ್ ದ್ರಾವಿಡ್ 2004-05ರಲ್ಲಿ ಈ ಸಾಧನೆ ಮಾಡಿದ್ದರು.
# ವಿರಾಟ್ ಕೊಹ್ಲಿ ಅವರು ಶ್ರೀಲಂಕಾ ವಿರುದ್ಧ ಸತತವಾಗಿ ಮೂರು ಶತಕ ಸಿಡಿಸಿದ್ದಾರೆ.
# ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್ ನಲ್ಲಿ ನಾಲ್ಕು ಶತಕ ಸಿಡಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಲಂಕಾ ವಿರುದ್ಧ 12 ಪಂದ್ಯಗಳಲ್ಲಿ ಒಟ್ಟು 4 ಶತಕ ಬಾರಿಸಿದ್ದಾರೆ.
# ಸತತ 5 ಇನ್ನಿಂಗ್ಸ್ ನಲ್ಲಿ 149.00 ರನ್ ಸರಾಸರಿಯಂತೆ 596 ರನ್ ಗಳಿಸಿರುವ ಕೊಹ್ಲಿ ಅವರು ಮ್ಯಾಥ್ಯೂ ಹೇಡನ್ ದಾಖಲೆ ಮುರಿದಿದ್ದಾರೆ. 2007 ರಲ್ಲಿ ಆಸೀಸ್ ನ ಹೇಡನ್ ಅವರು 132.25 ರನ್ ಸರಾಸರಿಯಂತೆ 529 ರನ್ ಗಳಿಸಿದ್ದರು.

# ಕಳೆದ ವರ್ಷ ಡಿಸೆಂಬರ್ 8 ರಂದು ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಗಳಿಸಿದ್ದ ವೀರೆಂದ್ರ ಸೆಹ್ವಾಗ್ 6 ಇನ್ನಿಂಗ್ಸ್ ನಂತರ ಮೊದಲ ಅರ್ಧ ಶತಕ 97 ಎಸೆತದಲ್ಲಿ 96 ರನ್ ಗಳಿಸಿದರು.
# ಸೆಹ್ವಾಗ್ ಒಟ್ಟಾರೆ 38ನೇ ಏಕದಿನ ಅರ್ಧ ಶತಕ ಹಾಗೂ ಶ್ರೀಲಂಕಾ ವಿರುದ್ಧ 5ನೇ ಅರ್ಧಶತಕ ಗಳಿಸಿದ್ದಾರೆ. ನರ್ವಸ್ ನೈಂಟಿಯಲ್ಲಿ 6 ಬಾರಿ ಔಟಾಗಿರುವ ಸೆಹ್ವಾಗ್, ಲಂಕಾ ವಿರುದ್ಧ 90 ರ ಗಡಿಯಲ್ಲಿ ಎರಡು ಬಾರಿ ಔಟಾದ ದಾಖಲೆ ಹೊಂದಿದ್ದಾರೆ.

# ಸೆಹ್ವಾಗ್ 131 ಪಂದ್ಯಗಳಲ್ಲಿ 5711 ರನ್ ಗಳನ್ನು 46.81 ರನ್ ಸರಾಸರಿಯಂತೆ ಬಾರಿಸಿದ್ದಾರೆ. 14 ಶತಕ ಹಾಗೂ 28 ಅರ್ಧಶತಕ ಇದೆ.
# ಶ್ರೀಲಂಕಾ ವಿರುದ್ಧ ಶ್ರೀಲಂಕಾದ ನೆಲದಲ್ಲಿ ವಿರಾಟ್ ಕೊಹ್ಲಿ ಪ್ರಥಮ ಶತಕ(106) ಸಿಡಿಸಿದ್ದು, ಭಾರತದ ಗೆಲುವಿಗೆ ಕಾರಣವಾಯಿತು.
# ಫೆ.28,2012, ಹೋಬಾರ್ಟ್, 133 ರನ್, ಮಾರ್ಚ್ 13, 2012, ಢಾಕಾ, 106 ರನ್(ಎರಡೂ ಶ್ರೀಲಂಕಾ ವಿರುದ್ಧ), ಮಾರ್ಚ್ 16, 2012, ಢಾಕಾ, 66 ರನ್( ಬಾಂಗ್ಲಾದೇಶ), ಮಾರ್ಚ್ 18, 2012, ಢಾಕಾ, 183 ರನ್( ಪಾಕಿಸ್ತಾನ) ಹಾಗೂ ಜು.21, 2012, ಹಂಬನ್ಟೋಟಾ, 106 ರನ್ (ಶ್ರೀಲಂಕಾ) ಇದು ಕೊಹ್ಲಿ ದಾಖಲೆ.

# ಪ್ರಸಕ್ತ ವರ್ಷದಲ್ಲಿ 4 ಪಂದ್ಯ ಶ್ರೇಷ್ಠ ಪ್ರಶಸ್ತಿ ಕೊಹ್ಲಿ ಅವರಿಗೆ ಸಂದಿದ್ದು ಇದು ಕೂಡಾ ದಾಖಲೆಯಾಗಿದೆ. ಒಟ್ಟಾರೆ 11 ಪಂದ್ಯ ಶ್ರೇಷ್ಠ ಪ್ರಶಸ್ತಿಗಳಲ್ಲಿ 3 ಪ್ರಶಸ್ತಿ ಶ್ರೀಲಂಕಾ ವಿರುದ್ಧ ಪಂದ್ಯಗಳಲ್ಲಿ ಬಂದಿದೆ.
# ಸೆಹ್ವಾಗ್ ಹಾಗೂ ಕೊಹ್ಲಿ ಅವರು 2ನೇ ವಿಕೆಟ್ ಗೆ ಸೇರಿಸಿದ 173 ರನ್ ಜೊತೆಯಾಟ ಶ್ರೀಲಂಕಾ ವಿರುದ್ಧ ಶ್ರೀಲಂಕಾದಲ್ಲಿ ಎರಡನೇ ಅತ್ಯಧಿಕ ಜೊತೆಯಾಟ ಎನಿಸಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್ ಅವರು ಕೊಲೊಂಬೊ ದಲ್ಲಿ ಫೆ.5, 2009ರಲ್ಲಿ 188ರನ್ ಕಲೆ ಹಾಕಿದ್ದರು.
# ಪ್ರಸಕ್ತ ವರ್ಷದಲ್ಲಿ 1000 ರನ್ ಕಲೆ ಹಾಕಿದ ಮೊದಲ ಆಟಗಾರ ಎಂಬ ಸಾಧನೆ ಕುಮಾರ್ ಸಂಗಕ್ಕಾರ ಅವರಿಗೆ ಸಲ್ಲುತ್ತದೆ. 25 ಪಂದ್ಯಗಳಲ್ಲಿ 45.13 ಸರಾಸರಿಯಂತೆ 1038 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 5 ಅರ್ಧ ಶತಕಗಳಿದೆ.
# ಸಂಗಕ್ಕಾರ ಒಂದು ವರ್ಷದ ಅವಧಿಯಲ್ಲಿ 1000 ರನ್ ಗಡಿ ದಾಟಿದ್ದು ಇದು ನಾಲ್ಕನೇ ಬಾರಿ. ಈ ಮುಂಚೆ 2004,2006,2011 ರಲ್ಲಿ ಈ ಸಾಧನೆ ಮಾಡಿದ್ದರು.
# ಭಾರತದ ವಿರುದ್ಧ 5ಕ್ಕೂ ಅಧಿಕ ಶತಕ ಗಳಿಸಿದ ಆಟಗಾರರ ಪಟ್ಟಿಗೆ ಸಂಗಕ್ಕಾರ ಕೂಡಾ ಸೇರ್ಪಡೆಗೊಂಡಿದ್ದಾರೆ. ಸನತ್ ಜಯಸೂರ್ಯ(7), ರಿಕಿ ಪಾಂಟಿಂಗ್ (6),ನಾಥನ್ ಆಸ್ಲೆ(5), ಸಲ್ಮಾನ್ ಬಟ್( 5) ಹಾಗೀ ಸಂಗಕ್ಕಾರ (5) ಈ ಪಟ್ಟಿಯಲ್ಲಿದ್ದಾರೆ.
# ಲಸಿತ್ ಮಾಲಿಂಗ ಪ್ರಪ್ರಥಮ ಬಾರಿಗೆ ಏಕದಿನ ಕ್ರಿಕೆಟ್ ನಲ್ಲಿ 10 ಓವರ್ ಗಳಲ್ಲಿ 80 ರನ್ ಚೆಚ್ಚಿಸಿಕೊಂಡು ಒಂದು ವಿಕೆಟ್ ಗಳಿಸದೆ ವೈಫಲ್ಯ ಅನುಭವಿಸಿದರು.

Story first published:  Sunday, July 22, 2012, 15:24 [IST]
English summary
Statistical highlights of the first ODI between India and Sri Lanka played at the Mahinda Rajapaksa International Cricket Stadium. India won by 21 runs. Virat Kohli was the Man-of-the-match.
ಅಭಿಪ್ರಾಯ ಬರೆಯಿರಿ