Englishहिन्दीമലയാളംதமிழ்తెలుగు

ಲಂಕಾ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೆ ಇಂಡಿಯಾ ನಂ.1

Posted by:
Updated: Friday, July 20, 2012, 12:33 [IST]
 

ಬೆಂಗಳೂರು,ಜು.20: ಸುಮಾರು 50 ದಿನಗಳ ಕಾಲ ಟೀಂ ಇಂಡಿಯಾ ಆಟದ ನೋಡದೆ ಬೇಜಾರಿಗಿದ್ದ ಅಭಿಮಾನಿಗಳಿಗೆ ಜು.21ರಿಂದ ಆರಂಭವಾಗಲಿರುವ ಲಂಕಾ ಪ್ರವಾಸ ಭರ್ಜರಿ ರಸದೌತಣ ನೀಡಲಿದೆ. ಪಾಕಿಸ್ತಾನದ ಮೇಲೆ ಉತ್ತಮ ಆಟ ಪ್ರದರ್ಶಿಸಿ ಒಳ್ಳೆ ಫಾರ್ಮ್ ನಲ್ಲಿರುವ ಲಂಕಾ ಪಡೆಯನ್ನು ಮಣಿಸಲು ಎಂಎಸ್ ಧೋನಿ ತಂಡ ಸಜ್ಜಾಗಿದ್ದು ಉತ್ತಮ ಆಟದ ನಿರೀಕ್ಷೆ ಹುಟ್ಟಿಸಿದೆ.

ಲಂಕಾ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೆ ಇಂಡಿಯಾ ನಂ.1

ಐದು ಏಕದಿನ ಪಂದ್ಯ ಹಾಗೂ ಏಕೈಕ ಟಿ20 ಪಂದ್ಯಗಳನ್ನಾಡುವ ಧೋನಿ ಬಳಗಕ್ಕೆ ಲಂಕಾ ಪ್ರವಾಸ ಉತ್ತಮ ಅವಕಾಶ ಒದಗಿಸಿದ್ದು, ಐಸಿಸಿ ಶ್ರೇಯಾಂಕದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರುವ ಅವಕಾಶ ಸಿಕ್ಕಿದೆ.

ಸದ್ಯ ನಾಲ್ಕನೇ ಶ್ರೇಯಾಂಕದಲ್ಲಿರುವ ಭಾರತ ತಂಡ ಏಕದಿನ ಪಂದ್ಯಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ಮೊದಲ ಸ್ಥಾನ ಪಡೆಯಬೇಕಾದರೆ ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವೀಪ್ ಮಾಡಿ ಸರಣಿ ತನ್ನದಾಗಿಸಿಕೊಳ್ಳಬೇಕು. [ವೇಳಾಪಟ್ಟಿ ನೋಡಿ]

2009ರಲ್ಲಿ ಕೆಲ ಕಾಲ ನಂ.1 ಸ್ಥಾನದಲ್ಲಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಹೊಸ ಹುರುಪಿನೊಂದಿಗೆ ಲಂಕಾ ಪ್ರವಾಸಕ್ಕೆ ಸಜ್ಜಾಗಿದೆ. ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ತನ್ನ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಶನಿವಾರ, ಜು.21 ರಂದು ಹಂಬನ್ಟೋಟದಲ್ಲಿ ಏಕದಿನ ಸರಣಿಯ ಮೊದಲ ಪಂದ್ಯ ನಡೆಯಲಿದೆ. 28 ವರ್ಷಗಳ ನಂತರ ಐಸಿಸಿ ಕ್ರಿಕೆಟ್ ವಿಶ್ವಕಪ್ ಎತ್ತಿದ ಸವಿ ನೆನಪಿನೊಂದಿಗೆ ಧೋನಿ ಪಡೆ ಲಂಕಾ ವಿರುದ್ಧ ಸೆಣೆಸಲಿದೆ.

ಇತ್ತೀಚೆಗೆ ಆಸ್ಟ್ರೇಲಿಯಾ ತಂಡ ಕಳಪೆ ಫಾರ್ಮ್ ಮುಂದುವರೆದಿದ್ದು, ಮೈಕಲ್ ಕ್ಲಾರ್ಕ್ ಅವರ ತಂಡ ಇಂಗ್ಲೆಂಡ್ ವಿರುದ್ಧ 4-0 ಹೀನಾಯ ಸೋಲು ಅನುಭವಿಸಿದೆ. ಮೊದಲ ನಾಲ್ಕು ತಂಡಗಳನ್ನು ಕೇವಲ 2 ಅಂಕಗಳು ಬೇರ್ಪಡಿಸಿದೆ. ಆಸ್ಟ್ರೇಲಿಯಾ ಹಾಗೂ ಭಾರತದ ಮಧ್ಯೆ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡವಿದೆ.

ಭಾರತ ತಂಡ: ಎಂಎಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ(ಉಪ ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ರವಿಚಂದ್ರನ್ ಅಶ್ಚಿನ್, ರೋಹಿತ್ ಶರ್ಮ, ಜಹೀರ್ ಖಾನ್, ಪ್ರಜ್ಞಾನ್ ಓಜಾ, ಇರ್ಫಾನ್ ಪಠಾಣ್, ರಾಹುಲ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಅಶೋಕ್ ದಿಂಡಾ, ಉಮೇಶ್ ಯಾದವ್

[ಜುಲೈ 19,2012ಕ್ಕೆ ಅನ್ವಯವಾಗುವಂತೆ ಶ್ರೀಲಂಕಾ vs ಭಾರತ ಸರಣಿಗೂ ಮುನ್ನ ಐಸಿಸಿ ಏಕದಿನ ಶ್ರೇಯಾಂಕ ಇಂತಿದೆ: ಈ ಸರಣಿ ನಂತರ ಐಸಿಸಿ ತನ್ನ ವಾರ್ಷಿಕ ಶ್ರೇಯಾಂಕ ಪಟ್ಟಿ ಹೊರ ತರಲಿದೆ.]

1. ಆಸ್ಟ್ರೇಲಿಯಾ (119 ಶ್ರೇಯಾಂಕ ಅಂಕ)
2. ದಕ್ಷಿಣ ಆಫ್ರಿಕಾ (118)
3. ಇಂಗ್ಲೆಂಡ್ (118)
4. ಭಾರತ (117)
5. ಶ್ರೀಲಂಕಾ (112)
6. ಪಾಕಿಸ್ತಾನ (103)
7. ವೆಸ್ಟ್ ಇಂಡೀಸ್ (87)
8. ನ್ಯೂಜಿಲೆಂಡ್ (830
9. ಬಾಂಗ್ಲಾದೇಶ (67)
10. ಜಿಂಬಾಬ್ವೆ (46)
11. ಐರ್ಲೆಂಡ್ (36)
12. ನೆದರ್ಲೆಂಡ್ (15)
13. ಕೀನ್ಯಾ (8)

(ದಟ್ಸ್ ಕ್ರಿಕೆಟ್)

Story first published:  Friday, July 20, 2012, 12:25 [IST]
English summary
India go into their five-match One Day International series in Sri Lanka with the chance to leap from its current fourth place standing to its previous number one ranking in the ICC ODI Team Rankings, according to a media release issued by the International Cricket Council.
ಅಭಿಪ್ರಾಯ ಬರೆಯಿರಿ