Englishहिन्दीമലയാളംதமிழ்తెలుగు

ವಿಶ್ವ ಟಿ20 ಸಂಭಾವ್ಯ ತಂಡಕ್ಕೆ ಯುವರಾಜ

Posted by:
Updated: Tuesday, July 24, 2012, 16:49 [IST]
 

ವಿಶ್ವ ಟಿ20 ಸಂಭಾವ್ಯ ತಂಡಕ್ಕೆ ಯುವರಾಜ
 

ಬೆಂಗಳೂರು, ಜು.18: ಪಂಜಾಬಿನ ವೀರ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಕ್ಯಾನ್ಸರ್ ನಿಂದ ಗುಣಮುಖರಾಗಿರುವ ಎಡಗೈ ಆಲ್ ರೌಂಡರ್ ಕ್ರಿಕೆಟರ್ ಯುವರಾಜ್ ಸಿಂಗ್ ಅವರನ್ನು ಐಸಿಸಿ 20-20 ವಿಶ್ವಕಪ್ ನ ಸಂಭಾವ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಅಮೆರಿಕದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಮರಳಿದ್ದ ಯುವರಾಜ್ 20-20 ವಿಶ್ವಕಪ್ ನಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಬೆಂಗಳೂರಿನ ಎನ್ ಸಿಎ ಯಲ್ಲಿ ಅಭ್ಯಾಸವನ್ನು ಆರಂಭಿಸಿದ್ದರು. ಭಾರತಕ್ಕೆ ಮರಳಿದ ಬಳಿಕ ವಿಶ್ರಾಂತಿ ಪಡೆದಿದ್ದ ಯುವರಾಜ್ ಕಳೆದ ಎರಡು ತಿಂಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ.

2011ರಲ್ಲಿ ನಡೆದ ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ತನ್ನ ಅದ್ಭುತ ಪ್ರದರ್ಶನದಿಂದಾಗಿ ಟೂರ್ನಮೆಂಟ್ ನ ಆಟಗಾರ ಪ್ರಶಸ್ತಿ ಗಳಿಸಿದ್ದರು. ಕಳೆದ ಕೆಲವು ಸಮಯದಿಂದ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗುತ್ತಿರುವ ಹರ್ಭಜನ್ ಸಿಂಗ್ ಕೂಡ ಸಂಭಾವ್ಯರಲ್ಲಿ ಸ್ಥಾನ ಪಡೆದಿದ್ದಾರೆ.

ಸಂಭಾವ್ಯ ತಂಡ: ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ, ಆರ್. ಅಶ್ವಿನ್, ಪ್ರಗ್ಯಾನ್ ಓಜ್ಹಾ, ಉಮೇಶ್ ಯಾದವ್, ಅಶೋಕ್ ದಿಂಡಾ, ಅಜಿಂಕ್ಯ ರಹಾನೆ, ಮನೋಜ್ ತಿವಾರಿ, ರಾಹುಲ್ ಶರ್ಮಾ, ವಿನಯ್ ಕುಮಾರ್, ಜಹೀರ್ ಖಾನ್, ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ, ಇರ್ಫಾನ್ ಪಠಾಣ್, ಯುಸುಫ್ ಪಠಾಣ್, ಮನದೀಪ್ ಸಿಂಗ್, ಪಿಯೂಸ್ ಚಾವ್ಲಾ, ರವೀಂದ್ರ ಜಡೇಜಾ, ಶಿಖರ್ ಧವನ್, ಅಂಬಾಟಿ ರಾಯುಡು, ಹರ್ಭಜನ್ ಸಿಂಗ್, ಮುನಾಫ್ ಪಟೇಲ್, ನಮನ್ ಓಜ್ಹಾ, ದಿನೇಶ್ ಕಾರ್ತಿಕ್, ಪ್ರವೀಣ್ ಕುಮಾರ್, ಎಲ್. ಬಾಲಾಜಿ.

Story first published:  Wednesday, July 18, 2012, 17:10 [IST]
English summary
Yuvraj Singh has been named in India's 30-man probables list for the upcoming ICC World Twenty20 2012.The left-hander, who underwent chemotherapy for a rare germ cell cancer, has not played cricket for more than seven months. His last match for India was a Test against West Indies in Kolkata in November, 2011.
ಅಭಿಪ್ರಾಯ ಬರೆಯಿರಿ