Englishहिन्दीമലയാളംதமிழ்తెలుగు

ಲಂಕಾ ಪ್ರವಾಸ ಕೈ ತಪ್ಪಿದ್ದು ಬೇಸರವಿದೆ: ವಿನಯ್

Posted by:
Updated: Friday, July 13, 2012, 21:33 [IST]
 

ಲಂಕಾ ಪ್ರವಾಸ ಕೈ ತಪ್ಪಿದ್ದು ಬೇಸರವಿದೆ: ವಿನಯ್
 

ಬೆಂಗಳೂರು, ಜು.13: ಜುಲೈ 21 ರಿಂದ ಆರಂಭವಾಗಲಿರುವ ಶ್ರೀಲಂಕಾ ಸರಣಿಗೆ ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ಅಲಭ್ಯರಾಗಿದ್ದಾರೆ. ವಿನಯ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ವಿನಯ್ ಬದಲಿಗೆ ಇರ್ಫಾನ್ ಪಠಾಣ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಲಂಕಾ ಪ್ರವಾಸ ಕೈತಪ್ಪಿದ್ದಕ್ಕೆ ಬೇಸರಗೊಂಡಿರುವ ವಿನಯ್ ಕುಮಾರ್ ಅವರು ನಮ್ಮ ಪ್ರತಿನಿಧಿ ಅಪ್ರಮೇಯ ಅವರ ಜೊತೆ ಚುಟುಕು ಮಾತುಕತೆ ನಡೆಸಿ ತಮ್ಮ ಗಾಯದ ಸಮಸ್ಯೆ ಬಗ್ಗೆ ಹೇಳಿಕೊಂಡರು.

'ಗುರುವಾರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಿರತನಾಗಿದ್ದಾಗ ಬಲ ಸ್ನಾಯು ಸೆಳೆತ ಉಂಟಾಯಿತು. ನಾನು ನಿರ್ಲಕ್ಷಿಸಿ ಹಾಗೆ ಅಭ್ಯಾಸ ನಿರತನಾಗಿಬಿಟ್ಟೆ. ಆದರೆ, ನಂತರ ನೋವು ಹೆಚ್ಚಾದಾಗ ವೈದ್ಯರ ಬಳಿ ಹೋದೆ.

ಶುಕ್ರವಾರ MRI ಸ್ಕ್ಯಾನ್ ನಡೆಸಲಾಯಿತು. ಇದು ಗ್ರೇಡ್ 1 ಸಮಸ್ಯೆ ಎಂದು NCA ವೈದ್ಯರು ನಿರ್ಧರಿಸಿದರು. ಗಾಯ ವಾಸಿಯಾಗಲು 2 ರಿಂದ 3 ವಾರ ಬೇಕಾಗುತ್ತದೆ ಎಂದು ಹೇಳಿದಾಗ ತುಂಬಾ ನಿರಾಶೆಯಾಯಿತು' ಎಂದು ವಿನಯ್ ದಟ್ಸ್ ಕ್ರಿಕೆಟ್ ಗೆ ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸಕ್ಕಾಗಿ ಕಠಿಣ ಅಭ್ಯಾಸ ನಿರತನಾಗಿದ್ದೇನೆ. ಈಗ ಅವಕಾಶ ಕೈತಪ್ಪಿರುವುದು ತುಂಬಾ ಬೇಸರ ತಂದಿದೆ. ಆದರೆ, ಕೆಲವು ಸಲ ಗೊತ್ತಿಲ್ಲದ್ದಂತೆ ಗಾಯದ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ 5 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಏಕೈಕ ಟ್ವೆಂಟಿ20 ಪಂದ್ಯಗಳನ್ನು ಆಡಲಿದೆ. ಜು.21ರಂದು ಹಂಬನ್ಟೋಟದಲ್ಲಿ ಸರಣಿ ಆರಂಭವಾಗಲಿದೆ. [ವೇಳಾಪಟ್ಟಿ ನೋಡಿ]

ಲಂಕಾ ಸರಣಿ ನಂತರ ಭಾರತ ತಂಡ ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ತಂಡ 2 ಟೆಸ್ಟ್ ಹಾಗೂ ಟಿ20 ಪಂದ್ಯ ಆಡಲಿದೆ. ಈ ಸರಣಿ ಆ.23 ರಂದು ಹೈದರಾಬಾದಿನಲ್ಲಿ ಆರಂಭವಾಗಲಿದೆ.

ದಾವಣಗೆರೆಯ 28 ವರ್ಷದ ವೇಗಿ ವಿನಯ್ ಕುಮಾರ್ ಅವರು ನ್ಯೂಜಿಲೆಂಡ್ ಸರಣಿ ಹೊತ್ತಿಗೆ ತಯಾರಾಗುವುದಾಗಿ ಹೇಳಿದರು.

ಈ ವರೆಗೂ ಭಾರತ ಪರ 1 ಟೆಸ್ಟ್ ಹಾಗೂ 22 ಏಕದಿನ ಪಂದ್ಯಗಳನ್ನಾಡಿದ್ದಾರೆ. 22 ಏಕದಿನ ಕ್ರಿಕೆಟ್ ವಿಕೆಟ್ ಹಾಗೂ ಟೆಸ್ಟ್ ನಲ್ಲಿ 1 ವಿಕೆಟ್ ಪಡೆದಿದ್ದಾರೆ. ಆಸ್ಟ್ರೇಲಿಯಾ ಸರಣಿ ನಂತರ ಟೆಸ್ಟ್ ಪಂದ್ಯವನ್ನಾಡಿಲ್ಲ.

ಭಾರತ ತಂಡ: ಎಂಎಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ(ಉಪ ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ರವಿಚಂದ್ರನ್ ಅಶ್ಚಿನ್, ರೋಹಿತ್ ಶರ್ಮ, ಜಹೀರ್ ಖಾನ್, ಪ್ರಜ್ಞಾನ್ ಓಜಾ, ಇರ್ಫಾನ್ ಪಠಾಣ್, ರಾಹುಲ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಅಶೋಕ್ ದಿಂಡಾ, ಉಮೇಶ್ ಯಾದವ್

Story first published:  Friday, July 13, 2012, 21:25 [IST]
English summary
Vinay Kumar is disappointed that he will miss the tour to Sri Lanka due to an injury. Now, he is aiming to return to the Indian team for the New Zealand series at home next month.
ಅಭಿಪ್ರಾಯ ಬರೆಯಿರಿ