Englishहिन्दीമലയാളംதமிழ்తెలుగు

ಉರಿವೇಗಿ ಬ್ರೆಟ್ ಲೀ ಕ್ರಿಕೆಟಿಗೆ ಗುಡ್ ಬೈ

Posted by:
Updated: Friday, July 13, 2012, 13:01 [IST]
 

ಉರಿವೇಗಿ ಬ್ರೆಟ್ ಲೀ ಕ್ರಿಕೆಟಿಗೆ ಗುಡ್ ಬೈ
 

ಸಿಡ್ನಿ, ಜು.13:: ಆಸ್ಟ್ರೇಲಿಯಾದ ವೇಗಿ ಸ್ಟೈಲೀಶ್ ಆಟಗಾರ, ಗಾಯಕ ಬ್ರೆಟ್ ಲೀ ಶುಕ್ರವಾರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಹಲವು ವರ್ಷಗಳ ಬ್ಯಾಟ್ಸ್ ಮನ್ ಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಈ ಅಪ್ರತಿಮ ವೇಗದ ಬೌಲರ್ ಐಪಿಎಲ್ ನಲ್ಲಿ ಆಡುವುದಾಗಿ ಹೇಳಿದ್ದಾರೆ.

'ಕಳೆದ 13 ವರ್ಷಗಳಿಂದ ವೃತ್ತಿ ಕ್ರಿಕೆಟ್ ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದೇನೆ. ಈಗ ನನ್ನ ದೇಹ ಹಾಗೂ ಮನಸ್ಸು ಇನ್ನಷ್ಟು ಪ್ರವಾಸಗಳನ್ನು ಸಹಿಸಿಕೊಳ್ಳುವ ಕ್ಷಮತೆಯನ್ನು ಹೊಂದಿಲ್ಲ. ಇದು ಅಧಿಕೃತ. ನಾನು ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತನಾಗಿದ್ದೇನೆ. ನನಗೆ ಸಿಕ್ಕಿದ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ. ಕಳೆದ 13 ವರ್ಷ ಅದ್ಭುತವಾಗಿತ್ತು' ಎಂದು ವಿದಾಯ ಹೇಳಿದ ಲೀ ತಿಳಿಸಿದರು. [ ಬ್ರೆಟ್ ಲೀ ಸಂಪೂರ್ಣ ಅಂಕಿ ಅಂಶ ]

ಇಂಗ್ಲೆಂಡಿಗೆ ತೆರಳಿದ್ದ ಲೀ ಸ್ನಾಯು ನೋವಿನಿಂದಾಗಿ ವಾಪಸ್ ಮರಳಿದ್ದರು. ನಿವೃತ್ತನಾಗಲು ಇದು ಒಳ್ಳೆಯ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಾನು ಇಂದು ಬೆಳಿಗ್ಗೆ ಎದ್ದೆ ಮತ್ತು ನಿವೃತ್ತಿ ಘೋಷಿಸಬೇಕೆಂದು ನಿರ್ಧರಿಸಿದೆ. 13ನೇ ತಾರೀಕು. ನಾನು ಟೆಸ್ಟ್ ಗೆ ಪಾದಾರ್ಪಣೆಗೈದು 13 ವರ್ಷವಾಗಿದೆ. ಇದು ತುಂಬಾ ವಿಶೇಷ ಎಂದು ಅವರು ಇದೇ ವೇಳೆ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರೂ ಇಂಡಿಯನ್ ಪ್ರಿಮಿಯರ್ ಲೀಗ್ ಹಾಗೂ KFC ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡುವುದಾಗಿ ಬ್ರೆಟ್ ಲೀ ಹೇಳಿದ್ದಾರೆ.

13 ವರ್ಷದ ಕ್ರಿಕೆಟ್ ಜೀವನದಲ್ಲಿ 76 ಟೆಸ್ಟ್ ಪಂದ್ಯ, 221 ಏಕದಿನ ಅಂತಾರಾಷ್ಟ್ರೀಯ ಪಂದ್ಯ ಹಾಗೂ 25 ಟಿ 20 ಪಂದ್ಯಗಳನ್ನು ಲೀ ಆಡಿದ್ದಾರೆ. ಆಸ್ಟ್ರೇಲಿಯಾ ಪರ ಗ್ಲೆನ್ ಮೆಗ್ರಾಥ್ ನಂತರ ಅತಿ ಹೆಚ್ಚು ವಿಕೆಟ್(ODI) ಪಡೆದ ಸಾಧನೆ ಲೀ ಹೆಸರಲ್ಲಿದೆ. 300ಕ್ಕೂ ಅಧಿಕ ಟೆಸ್ಟ್ ವಿಕೆಟ್ ಪಡೆದ ಆಸ್ಟ್ರೇಲಿಯನ್ನರ ಪೈಕಿ ಲೀ ಕೂಡಾ ಒಬ್ಬರು.

ಉತ್ತಮ ಗಾಯಕರಾಗಿರುವ ಲೀ, ಬಿಡುವಿನ ವೇಳೆಯಲ್ಲಿ ಗಿಟಾರ್ ಹಿಡಿದು ಹಾಡುತ್ತಿದ್ದರು. ಗಾಯಕಿ ಆಶಾ ಭೋಂಸ್ಲೆ ಅವರೊಂದಿಗೆ ಒಂದು ಮ್ಯೂಸಿಕ್ ಅಲ್ಬಂ ಕೂಡಾ ಹೊರತಂದಿದ್ದರು.ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಜೇಮ್ಸ್ ಸದರ್ಲೆಂಡ್ ಅವರು ಬ್ರೆಟ್ ಲೀ ಯನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟರ್ ಗಳ ಪೈಕಿ ಲೀ ಕೂಡಾ ಒಬ್ಬರು. ಅವರ ಸಾಧನೆ ಯುವ ಆಟಗಾರರಿಗೆ ಮಾದರಿಯಾಗಿದೆ.

ಅವರ 700ಕ್ಕೂ ಅಧಿಕ ವಿಕೆಟ್ ಗಳೇ ಅವರ ಶ್ರೇಷ್ಠತೆಯ ಕತೆ ಹೇಳುತ್ತದೆ. 1999ರ ಬಾಕ್ಸಿಂಗ್ ಡೇ ದಿನ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದ್ದಂತಿದೆ.

ಜು.7, 2012ರಂದು ಕೊನೆ ಬಾರಿಗೆ ಆಸೀಸ್ ಕ್ಯಾಪ್ ಧರಿಸಿದ್ದ ಲೀ 310 ಟೆಸ್ಟ್ ವಿಕೆಟ್, 380 ಏಕದಿನ ಕ್ರಿಕೆಟ್ ಗಳಿಸಿರುವುದು ಅವರ ಸಾಧನೆಗೆ ಹಿಡಿದ ಕನ್ನಡಿಯಾಗಿದೆ ಎಂದು ಜೇಮ್ಸ್ ಹೊಗಳಿದರು.

Story first published:  Friday, July 13, 2012, 12:52 [IST]
English summary
Australia fast bowler Brett Lee on Friday announced his retirement from international cricket but will continue to play in the Indian Premier League and Big Bash League.
ಅಭಿಪ್ರಾಯ ಬರೆಯಿರಿ