Englishहिन्दीമലയാളംதமிழ்తెలుగు

ಲಂಕಾ ಸರಣಿಗೆ ಜಹೀರ್, ಸೆಹ್ವಾಗ್ ಇನ್, ಭಜ್ಜಿ ಔಟ್

Posted by:
Updated: Wednesday, July 4, 2012, 18:07 [IST]
 

ಮುಂಬೈ, ಜು.4: ಶ್ರೀಲಂಕಾ ಪ್ರವಾಸ 2012ಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಯ್ಕೆ ಸಮಿತಿ ಭಾರತ ತಂಡವನ್ನು ಬುಧವಾರ(ಜು.4) ಮಧ್ಯಾಹ್ನ ಪ್ರಕಟಿಸಿದೆ. ಸಚಿನ್ ತೆಂಡೂಲ್ಕರ್ ಗೆ ವಿಶ್ರಾಂತಿ ನೀಡಲಾಗಿದ್ದು, ವಿರೇಂದರ್ ಸೆಹ್ವಾಗ್ ಹಾಗೂ ಜಹೀರ್ ಖಾನ್ ತಂಡಕ್ಕೆ ಮರಳಿದ್ದಾರೆ. ರವೀಂದ್ರ ಜಡೇಜ ಮತ್ತು ಹರ್ಭಜನ್ ಸಿಂಗ್ ರನ್ನು ತಂಡದಿಂದ ಕೈ ಬಿಡಲಾಗಿದೆ.

ಲಂಕಾ ಸರಣಿಗೆ ಜಹೀರ್, ಸೆಹ್ವಾಗ್ ಇನ್, ಭಜ್ಜಿ ಔಟ್

ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 1 ಟ್ವೆಂಟಿ ಪಂದ್ಯಗಳನ್ನು ಆಡಲಿದೆ. ಸರಣಿಯ ಮೊದಲ ಏಕದಿನ ಪಂದ್ಯ ಹಮ್ಬನ್ಟೊಟದಲ್ಲಿ ಜು.21ರಂದು ನಡೆಯಲಿದೆ. ಇಂಡಿಯನ್ ಪ್ರಿಮಿಯರ್ ಲೀಗ್ ನಂತರ ಸುದೀರ್ಘ ವಿಶ್ರಾಂತಿ ಅನುಭವಿಸಿರುವ ಟೀಂ ಇಂಡಿಯಾದ ಅನೇಕ ಆಟಗಾರರು ಈಗ ಹೊಸ ಹುರುಪಿನೊಂದಿಗೆ ಲಂಕಾ ಪ್ರವಾಸ ಮಾಡಲಿದ್ದಾರೆ. ಮೇ.27ರ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾದ ಆಟಗಾರರು ಆಡಿಲ್ಲ.

ಮಾರ್ಚ್ ನಲ್ಲಿ ಏಷ್ಯಾ ಕಪ್ ನಲ್ಲಿ ಆಡಿದ್ದ ಟೀಂ ಇಂಡಿಯಾ ನಂತರ ದಕ್ಷಿಣ ಆಫ್ರಿಕಾದಲ್ಲಿ ಮಾ.30ರಂದು ಏಕೈಕ ಟ್ವೆಂಟಿ20 ಪಂದ್ಯವಾಡಿತ್ತು. ಏಷ್ಯಾಕಪ್ ನಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ 100ನೇ ಶತಕ ದಾಖಲಿಸಿದ್ದರು. [ವೇಳಾಪಟ್ಟಿ ನೋಡಿ]

ಭಾರತ ತಂಡ: ಎಂಎಸ್ ಧೋನಿ(ನಾಯಕ), ವಿರಾಟ್ ಕೊಹ್ಲಿ(ಉಪ ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಸುರೇಶ್ ರೈನಾ, ರವಿಚಂದ್ರನ್ ಅಶ್ಚಿನ್, ರೋಹಿತ್ ಶರ್ಮ, ಜಹೀರ್ ಖಾನ್, ಪ್ರಜ್ಞಾನ್ ಓಜಾ, ವಿನಯ್ ಕುಮಾರ್, ರಾಹುಲ್ ಶರ್ಮ, ಮನೋಜ್ ತಿವಾರಿ, ಅಜಿಂಕ್ಯ ರಹಾನೆ, ಅಶೋಕ್ ದಿಂಡಾ, ಉಮೇಶ್ ಯಾದವ್

ಜುಲೈ ಮೂರನೇ ವಾರದಲ್ಲಿ ಈ ಸರಣಿ ನಡೆಯಲಿದ್ದು, ಆಗಸ್ಟ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ. ನಂತರ ಐಸಿಸಿ ವಿಶ್ವ ಟಿ20 ಟೂರ್ನಿಗಾಗಿ ಮತ್ತೊಮ್ಮೆ ಶ್ರೀಲಂಕಾಕ್ಕೆ ಟೀಂ ಇಂಡಿಯಾ ತೆರಳಲಿದೆ.

ಚುಟುಕು ಕ್ರಿಕೆಟ್ ಅಲ್ಲದೆ ಟೆಸ್ಟ್ ಸರಣಿ ಕೂಡಾ ಆಡಲು ಶ್ರೀಲಂಕಾ ಬೋರ್ಡ್ ಮನಸ್ಸು ಮಾಡಿತ್ತು. ಆದರೆ, ಏಕದಿನ ಕ್ರಿಕೆಟ್ ಹಾಗೂ ಟ್ವೆಂಟಿ20 ಪಂದ್ಯ ಆಡಲು ಮಾತ್ರ ಸಾಧ್ಯ. ಟೀಂ ಇಂಡಿಯಾ ವೇಳಾಪಟ್ಟಿಯಲ್ಲಿ ಟೆಸ್ಟ್ ಆಡಲು ಬಿಡುವಿಲ್ಲ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದ್ದರಿಂದ ಟೆಸ್ಟ್ ಸರಣಿ ಸಾಧ್ಯವಾಗಿಲ್ಲ.
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತಕ್ಕೆ ಶ್ರೀಲಂಕಾ ಪ್ರವಾಸ ಉತ್ತಮ ತಯಾರಿ ನೀಡಲಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕ್ರಿಸ್ ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಯುವರಾಜ್ ಸಿಂಗ್ ಲಭ್ಯತೆ: ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ವೇಳೆಗೆ ಯುವರಾಜ್ ಸಿಂಗ್ ಅವರು ಸಂಪೂರ್ಣವಾಗಿ ತಯಾರಾಗುತ್ತಾರೆ ಎಂದು ನಂಬಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಅವರು ತರಬೇತಿ ಪಡೆಯುತ್ತಿದ್ದಾರೆ. ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಯುವರಾಜ್ ಸೇರ್ಪಡೆಯಿಂದ ಭಾರತ ತಂಡ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಶ್ರೀಕಾಂತ್ ಹೇಳಿದರು.

Story first published:  Wednesday, July 4, 2012, 14:43 [IST]
English summary
Sachin Tendulkar has opted out of the Sri Lanka tour while Virender Sehwag and Zaheer Khan returned to the ODI squad. Ravindra Jadeja, Harbhajan has been dropped.
ಅಭಿಪ್ರಾಯ ಬರೆಯಿರಿ