Englishहिन्दीമലയാളംதமிழ்తెలుగు

ಏಷ್ಯಾ ಕಪ್: ಭಾರತ-ಪಾಕಿಸ್ತಾನ ಫೈನಲ್ ರೋಚಕ ಟೈ

Posted by:
Published: Sunday, July 1, 2012, 23:38 [IST]
 

ಏಷ್ಯಾ ಕಪ್: ಭಾರತ-ಪಾಕಿಸ್ತಾನ ಫೈನಲ್ ರೋಚಕ ಟೈ
 

ಕೌಲಾಲಂಪುರ, ಜು.1: ಯಾವುದೇ ಸ್ತರದ ಕ್ರಿಕೆಟ್ ಆಗಲಿ, ಭಾರತ ಮತ್ತು ಪಾಕಿಸ್ತಾನ ಪಂದ್ಯ ಎಂದರೆ ರೋಚಕತೆ ಇದ್ದೇ ಇರುತ್ತದೆ ಎಂಬ ಮಾತು ಮತ್ತೊಮ್ಮೆ ಸಾಬೀತಾಯಿತು. 19 ವರ್ಷ ವಯೋಮಿತಿಯೊಳಗಿನ ಅಟಗಾರರ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ರೋಚಕ ಟೈ ನಲ್ಲಿ ಅಂತ್ಯಗೊಂಡಿದೆ.

ಭಾನುವಾರ ಇಲ್ಲಿನ ಕಿನ್ರಾರಾ ಅಕಾಡೆಮಿಯಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ 283 ರನ್ ಗುರಿ ಬೆನ್ನು ಹತ್ತಿದ ಭಾರತ ತಂಡ ಗೆಲುವಿನ ಗೆರೆ ಮುಟ್ಟಿದರೂ ಮುಂದಕ್ಕೆ ದಾಟದೆ ಎದುರಾಳಿ ಪಾಕಿಸ್ತಾನದೊಡನೆ ಸಮಬಲವಾಗಿ ಪ್ರಶಸ್ತಿ ಹಂಚಿಕೊಂಡಿದೆ.

ಭಾರತದ ಪರ ಉನ್ಮುಕ್ತ್ ಚಂದ್ 121ರನ್ ಹಾಗೂ ಬಾಬಾ ಅಪರಾಜಿತ್ 90 ರನ್ ಹೊಡೆದು ಗೆಲುವಿನ ಹತ್ತಿರಕ್ಕೆ ತಂಡವನ್ನು ಕೊಂಡೊಯ್ದರು. ಈ ಇಬ್ಬರು ಆಟಗಾರರು 2ನೇ ವಿಕೆಟ್ ಗೆ 175ರನ್ ಗಳ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ, ನಂತರ 87 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಭೀತಿ ಎದುರಿಸಿತು. 175 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದ ಭಾರತ ಮೂರನೇ ಬಾರಿಗೆ ಏಷ್ಯಾಕಪ್ ಎತ್ತುವ ಗುರಿ ಹೊಂದಿತ್ತು.

ಅಪರಜಿತ್ ಔಟ್ ಆದ ಮೇಲೆ ಮಧ್ಯಮ ಕ್ರಮಾಂಕ ಕುಸಿತ ಕಂಡಿತು ವಿಜಯ್ ಜೊಲ್, ಅಕ್ಷ್ ದೀಪ್ ನಾಥ್, ಸಂಜು ಸ್ಯಾಮ್ಸನ್ ಹಾಗೂ ಸ್ಮಿತ್ ಪಟೇಲ್ ಕಡಿಮೆ ಮೊತ್ತ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು.

ಚಂದ್ ಅದ್ಭುತ ಬ್ಯಾಟಿಂಗ್: ಕ್ರೀಸ್ ನ ಇನ್ನೊಂದು ತುದಿಯಲ್ಲಿ 120ರನ್ ಗಳಿಸಿ ನೆಲಕಚ್ಚಿ ನಿಂತಿದ್ದ ಚಂದ್ ಕೊನೆಯ ಓವರ್ ನ ನಾಲ್ಕನೇ ಎಸೆತಕ್ಕೆ ಬಲಿಯಾದರು. ಭಾರತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 282 ರನ್ ಮಾತ್ರ ಗಳಿಸಿತು.

ಇದಕ್ಕೂ ಮುನ್ನ ಪಾಕಿಸ್ತಾನ ಕೂಡಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. 162 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕ್ 300 ಪ್ಲಸ್ ರನ್ ಗಳಿಸುವ ಸಾಧ್ಯತೆಯಿತ್ತು. ಭಾರತ ಪರ ರಶ್ ಕಾಲೆರಿಯಾ 37 ರನ್ನಿತ್ತು 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಕೊನೆ 5 ಓವರ್ ಗಳಲ್ಲಿ 29 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡ ಪಾಕಿಸ್ತಾನ 300ರನ್ ಗಳ ಗಡಿಯಿಂದ ದೂರ ಉಳಿಯಿತು.

ಪಾಕ್ ಪರ ಸಮಿ ಅಸ್ಲಾಂ 134 ರನ್ ಹೊಡೆದು ಭರ್ಜರಿ ಆಟವಾಡಿದರು.ಆದರೆ ಇತರೆ ಬ್ಯಾಟ್ಸ್ ಮನ್ ಗಳು ಉತ್ತಮ ಸಾಥ್ ನೀಡುವಲ್ಲಿ ವಿಫಲರಾದರು.

ಉನ್ಮುಕ್ತ್ ಚಂದ್ ಹಾಗೂ ಸಮಿ ಅಸ್ಲಾಂ ಇಬ್ಬರು ಎಸಿಸಿ U-19 ಏಷ್ಯಾ ಕಪ್ ಮ್ಯಾನ್ ಆಫ್ ದಿ ಮ್ಯಾಚ್ ಎನಿಸಿದರು.

ಶ್ರೀಲಂಕಾದ ಥರಿಂದು ಕೌಶಲ್ ಟೂರ್ನಿಯ ಅತ್ಯುತ್ತಮ ಬೌಲರ್ ಎನಿಸಿದರು. ಅಸ್ಲಾಂ ಬ್ಯಾಟ್ಸ್ ಮನ್ ಪ್ರಶಸ್ತಿ ಗಿಟ್ಟಿಸಿಕೊಂಡರು.

ಆಗಸ್ಟ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಐ U-19 ವಿಶ್ವಕಪ್ ಪಂದ್ಯಕ್ಕೆ ತೆರಳಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಕ್ಗಳಿಗೆ ಏಷ್ಯಾಕಪ್ ಅದ್ಭುತ ತಯಾರಿ ನೀಡಿದೆ.

ಸಂಕ್ಷಿಪ್ತ ಸ್ಕೋರ್: ಭಾರತ 282/2, 50 ಓವರ್ (ಉನ್ಮುಕ್ತ್ ಚಂದ್ 121, ಬಾಬಾ ಅಪರಾಜಿತ್ 90, ಮಹಮ್ಮಸ್ ನವಾಜ್ 3/45)
ಪಾಕಿಸ್ತಾನ 282/9, 50 ಓವರ್ (ಸಮಿ ಅಸ್ಲಾಂ 134, ಉಮರ್ ವಹೀದ್ 48, ರಷ್ ಕಲೆರಿಯಾ 5/37)
(ದಟ್ಸ್ ಕ್ರಿಕೆಟ್)

English summary
The final clash of the Under-19 Asia Cup 2012 ended in a nerve-racking tie between India U-19 and Pakistan U-19 played at the Kinrara Academy Oval on Sunday in Kuala Lumpur.
ಅಭಿಪ್ರಾಯ ಬರೆಯಿರಿ