Englishहिन्दीമലയാളംதமிழ்తెలుగు

ವಿಶ್ವ ಶ್ರೇಷ್ಠ 50 ಕ್ರೀಡಾಪಟುಗಳಲ್ಲಿ ಧೋನಿಗೆ ಸ್ಥಾನ

Posted by:
Published: Wednesday, June 27, 2012, 21:49 [IST]
 

ವಿಶ್ವ ಶ್ರೇಷ್ಠ 50 ಕ್ರೀಡಾಪಟುಗಳಲ್ಲಿ ಧೋನಿಗೆ ಸ್ಥಾನ
 

ನವದೆಹಲಿ, ಜೂ.27: ಟೀಂ ಇಂಡಿಯಾದ ನಾಯಕ ಎಂಎಸ್ ಧೋನಿ ಹಾಗೂ ಐದು ಬಾರಿ ವಿಶ್ವ ಚಾಂಪಿಯನ್ ಬಾಕ್ಸರ್ ಎಂಸಿ ಮೇರಿ ಕೊಮ್ ಅವರು ವಿಶ್ವ ಶ್ರೇಷ್ಠ 50 ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬ್ರಿಟಿಷ್ ಮಾಸ ಪತ್ರಿಕೆ ಹೊರ ತಂದಿರುವ ಪಟ್ಟಿಯಲ್ಲಿ ಎಂಎಸ್ ಧೋನಿ 16 ಹಾಗೂ ಕೋಮ್ ಅವರು 38ನೇ ಸ್ಥಾನ ಗಳಿಸಿದ್ದಾರೆ.ರಿತಿ ಸ್ಫೋರ್ಟ್ ಜೊತೆ 42 ಮಿಲಿಯನ್ ಯುಎಸ್ ಡಾಲರ್ ಒಪ್ಪಂದ ಮಾಡಿಕೊಂಡಿರುವ ಧೋನಿ 20ಕ್ಕೂ ಅಧಿಕ ಬ್ರಾಂಡ್ ಗಳಿಗೆ ರಾಯಭಾರಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿಯ ಅಂಚಿನಲ್ಲಿರುವುದರಿಂದ ಧೋನಿ ಮೌಲ್ಯ ಇನ್ನಷ್ಟು ಹೆಚ್ಚಿದೆ ಎಂದು ಪತ್ರಿಕೆ ಹೇಳಿದೆ.

ಮುಂದಿನ ಮೂರು ವರ್ಷಗಳಲ್ಲಿ ಕ್ರೀಡಾಪಟುಗಳ ಬ್ರಾಂಡ್ ಮೌಲ್ಯ, ಮಾರುಕಟ್ಟೆಯಲ್ಲಿ ಅವರಿಗಿರುವ ಪ್ರಭಾವದ ಲೆಕ್ಕಾಚಾರ ಹಾಕಿ ಸ್ಫೋರ್ಟ್ಸ್ ಪ್ರೊ ಎಂಬ ಪತ್ರಿಕೆ ಈ ಪಟ್ಟಿ ಬಿಡುಗಡೆ ಮಾಡಿದೆ.

ಲಂಡನ್ ಒಲಿಂಪಿಕ್ಸ್ ಗೆ 51 ಕೆಜಿ ವಿಭಾಗದಲ್ಲಿ ಆರ್ಹತೆ ಪಡೆದ ಭಾರತದ ಏಕೈಕ ಮಹಿಳಾ ಬಾಕ್ಸರ್ ಆಗಿರುವ ಎರಡು ಮಕ್ಕಳ ತಾಯಿ 29 ವರ್ಷದ ಮಾಂಗ್ತೆ ಚುಂಗ್ನೆಜಾಂಗ್ ಮೇರಿ ಕೋಮ್
ಕೋಮ್ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಬ್ರೆಜಿಲ್ ನ ಅದ್ಭುತ ಫುಟ್ಬಾಲ್ ಆಟಗಾರ ನೆಮಾರ್ ಗಳಿಸಿದ್ದಾರೆ.

ವಿಶ್ವದ ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿರುವುದು ಕೇಳಿ ಖುಷಿಯಾಯಿತು. ಸ್ಫೋರ್ಟ್ ಪ್ರೊಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಕೋಮ್ ಹೇಳಿದ್ದಾರೆ. ಲಂಡನ್ ಒಲಿಂಪಿಕ್ಸ್ ಗಾಗಿ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಿಶ್ವಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ (3), ಉಸೈನ್ ಬೋಲ್ಡ್ (4), ಕ್ರಿಶ್ಚಿಯಾನೋ ರೊನಾಲ್ಡೊ (5), ರೊರಿ ಮೆಕ್ ಲ್ರಾಯ್, ಶೆರಪೊವಾ, ನೋವಾಕ್ ಜೋಕೋವಿಕ್, ಲಿವಿಸ್ ಹ್ಯಾಮಿಲ್ಟನ್ ಮುಂತಾದವರಿದ್ದಾರೆ.

ಪಟ್ಟಿಯಲ್ಲಿ ಏಳು ಜನ ಫುಟ್ಬಾಲ್ ಆಟಗಾರರು, ಆರು ಜನ ಬಾಸ್ಕೆಟ್ ಬಾಲ್ ಹಾಗೂ ಟೆನಿಸ್ ಆಟಗಾರರು, ಐದು ಜನ ಡ್ರೈವರ್ ಗಳು, ನಾಲ್ಕು ಗಾಲ್ಫರ್ಸ್ ಹಾಗೂ ನಾಲ್ಕು ಜನ ಅಮೆರಿಕನ್ ಫುಟ್ಬಾಲರ್ ಗಳನ್ನು ಹೊಂದಿದೆ. 19 ಜನ ಅಮೆರಿಕನ್, 7 ಬ್ರಿಟಿಷರು ಹಾಗೂ ರಷ್ಯಾ ಮತ್ತು ಬ್ರೆಜಿಲ್ ನ ಮೂವರು ಆಟಗಾರರಿದ್ದಾರೆ. ಭಾರತದ ಪರವಾಗಿ 2 ಆಟಗಾರರಿದ್ದಾರೆ.

ವೇಯ್ನ್ ರೂನಿ, ಕೊಬೆ ಬ್ರಾಂಟ್ ಹಾಗೂ ಎಫ್ 1 ಸ್ಟಾರ್ ಫರ್ನಾಂಡೋ ಅಲಾನ್ಸೋ ಈ ಬಾರಿ 50ರ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. 2010ರಲ್ಲಿ ಮೂರನೇ ಸ್ಥಾನದಲ್ಲಿದ್ದ ಟೈಗರ್ ವುಡ್ಸ್ ಈ ಬಾರಿ 47ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಕ್ರಿಕೆಟ್ ನಲ್ಲಿ ಎಂಎಸ್ ಧೋನಿಯಲ್ಲದೆ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ 48ನೇ ಸ್ಥಾನ ಪಡೆದು ಪಟ್ಟಿಯಲ್ಲಿರುವ ಮತ್ತೊಬ್ಬ ಕ್ರಿಕೆಟರ್ ಆಗಿದ್ದಾರೆ.

English summary
Team India captain MS Dhoni and five-time world champion boxer M.C. Mary Kom have been rated as the 16th and 38th most marketable athletes in the world respectively by a British monthly.
ಅಭಿಪ್ರಾಯ ಬರೆಯಿರಿ