Englishहिन्दीമലയാളംதமிழ்తెలుగు

ಸಚಿನ್ ಗಿಂತ ಧೋನಿ ಶ್ರೀಮಂತ ಹೇಗೆ?

Posted by:
Published: Wednesday, June 20, 2012, 19:05 [IST]
 

ಸಚಿನ್ ಗಿಂತ ಧೋನಿ ಶ್ರೀಮಂತ ಹೇಗೆ?
 

ಲಂಡನ್, ಜೂ.20: ಫೋರ್ಬ್ಸ್ ಬಿಡುಗಡೆ ಮಾಡಿರುವ ವಿಶ್ವದ ನೂರು ಮಂದಿ ಅತಿ ಶ್ರೀಮಂತ 100 ಕ್ರೀಡಾಪಟುಗಳಲ್ಲಿ ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಉಸೈನ್ ಬೋಲ್ಡ್, ನೊವಾಕ್ ಜೊಕೊವಿಕ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಫೋರ್ಬ್ಸ್ ಬಿಡುಗಡೆ ಮಾಡಿದ ನೂರು ಮಂದಿ ಅತೀ ಶ್ರೀಮಂತ ಕ್ರೀಡಾಳುಗಳ ಪಟ್ಟಿಯಲ್ಲಿ ಧೋನಿ 31ನೇ ಸ್ಥಾನದಲ್ಲಿದ್ದಾರೆ. ಜೊಕೊವಿಕ್ 62, ಬೋಲ್ಟ್ 62 ಮತ್ತು ಸಚಿನ್ 78ನೇ ಸ್ಥಾನದಲ್ಲಿದ್ದಾರೆ. ಸ್ಟಾರ್ ಫುಟ್ಬಾಲ್ ಆಟಗಾರರಾದ ವೆಯ್ನ್ ರೂನಿ ಮತ್ತು ಫೆರ್ನಾಂಡೊ ಟೊರಸ್ ಕೂಡ ಧೋನಿಗಿಂತ ಹಿಂದಿದ್ದಾರೆ.

ಈ ಪಟ್ಟಿಯಲ್ಲಿ ಬಾಕ್ಸಿಂಗ್ ಚಾಂಪಿಯನ್ ಫ್ಲಾಯ್ಡ್ ಮೇವೆದರ್ ಅಗ್ರ ಸ್ಥಾನ ಗಳಿಸಿದ್ದಾರೆ. ಟೈಗರ್ ವುಡ್ಸ್ ಮೂರನೇ ಸ್ಥಾನ ಪಡೆದಿದ್ದಾರೆ. ಧೋನಿ 23 ಮಿಲಿಯನ್ ಡಾಲರ್ ಹಣವನ್ನು ಜಾಹೀರಾತಿನಿಂದ ಸಂಪಾದಿಸುತ್ತಾರೆಂದು ಫೋರ್ಬ್ಸ್ ವರದಿ ಮಾಡಿದೆ.

ಧೋನಿ ಜಾಹೀರಾತಿನಲ್ಲಿ ಫುಟ್ಬಾಲಿಗ ಲಿಯೊನಲ್ ಮೆಸ್ಸಿಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಮೆಸ್ಸಿ ಒಟ್ಟು ಸಂಪಾದನೆಯಲ್ಲಿ 11ನೇ ಸ್ಥಾನದಲ್ಲಿದ್ದಾರೆ.

ಧೋನಿ Vs ಸಚಿನ್ : ಐಸಿಸಿಯ ಜಾಗತಿಕ ಪ್ರಾಯೋಜಕ ಸಂಸ್ಥೆಯಾಗಿರುವ ಪೆಪ್ಸಿ, ಈಗಾಗಲೇ ಭಾರಿ ಮೊತ್ತ ಕೊಟ್ಟು ಎಂಎಸ್ ಧೋನಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇದಲ್ಲದೆ, ಯುಬಿ ಗ್ರೂಪ್(26 ಕೋಟಿ), ಮ್ಯಾಕ್ಸ್ ಮೊಬೈಲ್ (29 ಕೋಟಿ) ಜೊತೆ ಕೂಡಾ ಧೋನಿ ಒಪ್ಪಂದ ಮಾಡಿಕೊಂಡಿದ್ದಾರೆ.

ಸಚಿನ್ ಬಳಿ ಐಟಿಸಿಯ ಸನ್ ಫೀಸ್ಟ್, ಅಡಿಡಾಸ್, Audemars Piguet(ಸ್ವಿಸ್ ಕೈ ಗಡಿಯಾರ ತಯಾರಕರು), ಕ್ಯಾನನ್, ಅವಿವಾ ಜೀವ ವಿಮೆ, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್, ತೋಷಿಬಾ ಮುಂತಾದ 14 ಬ್ರ್ಯಾಂಡ್ ಗಳಿವೆ. 20 ಕೋಟಿಗೆ ಪೆಪ್ಸಿ ಬದಲು ಕೋಕಾಕೋಲಾ ಕುಡಿಯಲು ಮನಸ್ಸು ಮಾಡಿದ ಸಚಿನ್ ಬ್ರಾಂಡ್ ಮೌಲ್ಯ ಕುಸಿಯುತ್ತಿರುವುದು ಸುಳ್ಳಲ್ಲ. ಧೋನಿ ಪಟ್ಟಿಯಲ್ಲಿ ಇದಕ್ಕೂ ಡಬಲ್ ಬ್ರ್ಯಾಂಡ್ ಗಳಿದೆ.

ರೂನಿ 24.3 ಮಿಲಿಯನ್ ಡಾಲರ್ ಸಂಪಾದನೆ ಮಾಡಿ 37ನೇ ಸ್ಥಾನ ಪಡೆದಿದ್ದಾರೆ. ಆರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಜೊಕೊವಿಕ್ ಸಂಪಾದನೆ 20.6 ಮಿಲಿಯನ್, ಒಲಿಂಪಿಕ್ ಚಾಂಪಿಯನ್ ಸಂಪಾದನೆ 20.3 ಮಿಲಿಯನ್ ಡಾಲರ್, ಮಹಿಳೆಯರಲ್ಲಿ ರಷ್ಯಾದ ಟೆನಿಸ್ ಬೆಡಗಿ ಮರಿಯಾ ಶರಪೋವಾ 26ನೇ ಸ್ಥಾನ ಪಡೆದಿದ್ದು, ಅವರ ಒಟ್ಟು ಸಂಪಾದನೆ 27.9 ಮಿಲಿಯನ್ ಡಾಲರ್ ಆಗಿದೆ.

ಟಾಪ್ 10 ಶ್ರೀಮಂತ ಕ್ರೀಡಾಪಟುಗಳು:

1.ಫ್ಲಾಯ್ಡ್ ಮೇವೆದರ್(ಬಾಕ್ಸಿಂಗ್) ($85 ಮಿಲಿಯನ್)
2. ಮನ್ನಿ ಪಕ್ಯೂ(ಬಾಕ್ಸಿಂಗ್) ($62 ಮಿಲಿಯನ್)
3. ಟೈಗರ್ ವುಡ್ಸ್ (ಗಾಲ್ಫ್) ($59.4 ಮಿಲಿಯನ್)
4. ಲೆಬ್ರಾನ್ ಜೇಮ್ಸ್ (ಬ್ಯಾಸ್ಕೆಟ್ ಬಾಲ್) ($53 ಮಿಲಿಯನ್)
5. ರೋಜರ್ ಫೆಡರರ್ (ಟೆನಿಸ್) ($52.7 ಮಿಲಿಯನ್)
6. ಕೊಬೆ ಬ್ರಾಂಟ್ (ಬ್ಯಾಸ್ಕೆಟ್ ಬಾಲ್) ($52.3 ಮಿಲಿಯನ್)
7. ಫಿಲ್ ಮೆಕಲ್ಸನ್ (ಗಾಲ್ಫ್) ($47.8 ಮಿಲಿಯನ್)
8. ಡೇವಿಡ್ ಬೆಕ್ ಹಾಮ್ (ಫುಟ್ಬಾಲ್) ($46 ಮಿಲಿಯನ್)
9. ಕ್ರಿಶ್ಚಿಯನೋ ರೊನಾಲ್ಡೋ (ಫುಟ್ಬಾಲ್) ($42.5 ಮಿಲಿಯನ್)
10. ಪೆಯ್ಟಾನ್ ಮನ್ನಿಂಗ್ (ಅಮೆರಿಕನ್ ಫುಟ್ಬಾಲ್) ($42.4 ಮಿಲಿಯನ್)

ಇನ್ನಿಳಿದ ಪ್ರಮುಖ ಆಟಗಾರರು:
11. ಲಿಯೋನಿಲ್ ಮೆಸ್ಸಿ(ಫುಟ್ಬಾಲ್) ($39 ಮಿಲಿಯನ್)
26. ಮರಿಯಾ ಶರಪೋವಾ (ಟೆನಿಸ್) ($27.9 ಮಿಲಿಯನ್)
31. ಎಂಎಸ್ ಧೋನಿ (ಕ್ರಿಕೆಟ್) ($26.5 ಮಿಲಿಯನ್)
37. ವೇಯ್ನ್ ರೂನಿ (ಫುಟ್ಬಾಲ್) ($24.3 ಮಿಲಿಯನ್)
62. ನೋವಾಲ್ ಜೋಕೋವಿಕ್(ಟೆನಿಸ್) ($20.6 ಮಿಲಿಯನ್)
63. ಉಸೈನ್ ಬೋಲ್ಟ್ (ಅಥ್ಲೆಟಿಕ್ಸ್) ($20.3 ಮಿಲಿಯನ್)
78. ಸಚಿನ್ ತೆಂಡೂಲ್ಕರ್ (ಕ್ರಿಕೆಟ್ ) ($18.6 ಮಿಲಿಯನ್).

English summary
Indian captain MS Dhoni has beaten Master Blaster Sachin Tendulkar in the annual world's 100 richest sportspersons list announced by Forbes magazine.
ಅಭಿಪ್ರಾಯ ಬರೆಯಿರಿ