Englishहिन्दीമലയാളംதமிழ்తెలుగు

ಸಿಎಂ ಸದಾನಂದ ಬ್ಯಾಟಿಂಗ್ ಸಿಬ್ಬಂದಿ ಗಡಗಡ

Posted by:
Published: Tuesday, June 19, 2012, 13:33 [IST]
 

ಬೆಂಗಳೂರು, ಜೂ.19: ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಎರಡು ಕೈಗೆ ಗ್ಲೌಸ್ ಧರಿಸಿ ಬ್ಯಾಟ್ ಮಾಡಲು ನಿಂತಿದ್ದರು. ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಎಸೆದ ಮೊದಲ ಚೆಂಡನ್ನು ಎರ್ರಾಬಿರಿ ಅಫ್ರಿದಿ ಹೊಡೆದಂತೆ ಸದಾನಂದ ಅವರು ಲೆಗ್ ಸೈಡ್ ಚೆಚ್ಚಿದರು. ಹತ್ತಿರದಲ್ಲಿದ್ದ ಸಿಎಂ ಭದ್ರತಾ ಸಿಬ್ಬಂದಿ ಮಾತ್ರ ಗಾಬರಿಗೊಂಡು ಒಂದೆರಡು ಹೆಜ್ಜೆ ಹಿಂದಕ್ಕೆ ನಡೆದರು.

ನಂತರ ಮಾಜಿ ಕ್ರಿಕೆಟ್ ದಂತಕತೆ ಜಿಆರ್ ವಿಶ್ವನಾಥ್ ಅವರು ಸಿಎಂ ಬಳಿಗೆ ಬಂದು ಹಾಗಲ್ಲ, ಹೀಗೆ ಎಂದು ಬ್ಯಾಟಿಂಗ್ ಮಾಡುವ ವಿಧಾನ ಹೇಳಿಕೊಟ್ಟರು. ಮೊದಲ ಚೆಂಡು ಬಾರಿಸಿದ್ದ ರೀತಿ ಕಂಡು ಸ್ವತಃ ಸದಾನಂದ ಗೌಡರೇ ಅಚ್ಚರಿ ಪಟ್ಟಿದ್ದರು.

ಆದರೆ, ಎರಡನೇ ಎಸೆತದಲ್ಲಿ ಡಿಫೆನ್ಸ್ ಮಾಡಲು ಹೋದ ಮುಖ್ಯಮಂತ್ರಿಗಳು ಕ್ಲೀನ್ ಬೌಲ್ಡ್ ಆಗಿಬಿಟ್ಟರು. ಕೆಎಫ್ ಸಿ ಎಯ ಹೊಸ ಅಕಾಡೆಮಿ ಉದ್ಘಾಟನೆ ಸಂದರ್ಭದಲ್ಲಿ ಈ ಘಟನೆ ನಡೆಯಿತು.

ರಾಜ್ಯ ಸರ್ಕಾರ ತನ್ನ ಇತಿಮಿತಿಯೊಳಗೆ ಕ್ರಿಕೆಟ್ ಸೇರಿದಂತೆ ಇತರ ಎಲ್ಲ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಿದೆ ಎಂದು ಮುಖ್ಯಮಂತ್ರಿ ಸದಾನಂದಗೌಡ ಹೇಳಿದರು.

ರಾಯಲ್ ಚಾಲೆಂಜರ್ಸ್ ತಂಡದ ಕೆಎಫ್ ಸಿಎ ಅಕಾಡೆಮಿ ಉದ್ಘಾಟನೆ ಮಾಡಿದ ನಂತರ ಅವರು ಮಾತನಾಡಿದರು.

ಕೆಎಸ್ ಸಿಎ ಅಕಾಡೆಮಿಯಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಉತ್ತಮ ಯೋಜನಾ ಸಂಯೋಜನೆಗಳು, ದೇಶಕ್ಕೆ ರಾಜ್ಯದಿಂದ ಅತ್ಯುತ್ತಮ ಕ್ರೀಡಾಪಟುಗಳು ಆಯ್ಕೆಯಾಗುತ್ತಿರುವುದು ಶ್ಲಾಘನೀಯ. ಮುಂದೆಯೂ ಸಂಸ್ಥೆ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮತ್ತಿತರರು ಉಪಸ್ಥಿತರಿದ್ದರು.ಮಾಜಿ ಕ್ರಿಕೆಟರ್ಸ್ ಜಿಆರ್ ವಿಶ್ವನಾಥ್, ಸೈಯದ್ ಕಿರ್ಮಾನಿ ಹಾಗೂ ರೋಜರ್ ಬಿನ್ನಿ ಕೂಡಾ ಮೈದಾನಕ್ಕೆ ಬಂದಿದ್ದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕೆಎಸ್ ಸಿಎ ಅಕಾಡೆಮಿಯಲ್ಲಿ ವಿಡಿಯೋ ಆಧಾರಿತ ಕೋಚಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಅಕಾಡೆಮಿಗೆ ವಿಜಯ್ ಮಲ್ಯ ಅವರ ಯುಬಿ ಸಮೂಹ ಪ್ರಯೋಜಕತ್ವ ವಹಿಸಿಕೊಂಡಿದೆ.

ಈ ಅಕಾಡೆಮಿಯನ್ನು ಬೆಂಗಳೂರು ಅಲ್ಲದೆ ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲೂ ಆರಂಭಿಸಲಾಗುವುದು.

ಉನ್ನತ ತಂತ್ರಜ್ಞಾನ ಬಳಸಿ ಕ್ರಿಕೆಟರ್ಸ್ ಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ರಾಜ್ಯದ ಎಲ್ಲೆಡೆ ಇರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಕೆಎಸ್ ಸಿಎ ಅಧಿಕಾರಿ ಜಾವಗಾಲ್ ಶ್ರೀನಾಥ್ ಹೇಳಿದ್ದಾರೆ.

English summary
Karnataka State Cricket Association (KSCA), in its bid to tap talent at the grassroots level, began its operation of the Royal Challengers Karnataka State Cricket Academy at the M Chinnaswamy Stadium premises on Monday. The academy was formally inaugurated by Karnataka Chief Minister DV Sadananda Gowda in the presence of former India cricketers GR Viswanath, Roger Binny, Javagal Srinath and Anil Kumble among others.
ಅಭಿಪ್ರಾಯ ಬರೆಯಿರಿ