ನವದೆಹಲಿ, ಫೆ 4: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಸಹರಾ ಇಂಡಿಯಾ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಾಯೋಜಕತ್ವಕ್ಕೆ ವಿದಾಯ ಹೇಳಿದೆ. ಅಷ್ಟೇ ಅಲ್ಲದೆ ಐಪಿಎಲ್ ಪುಣೆ ಫ್ರಾಂಚೈಸಿಯ ಪ್ರಾಯೋಜಕತ್ವವನ್ನು ಕೂಡ ಕೈಬಿಡಲು ನಿರ್ಧರಿಸಿದೆ.
ಸಹಾರ ಸಂಸ್ಥೆಯ ಈ ನಿರ್ಧಾರದಿಂದ ಬಿಸಿಸಿಐ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಐದನೇ ಆವೃತ್ತಿಯ ಹರಾಜು ಪ್ರಕ್ರಿಯೆ ಸಮಯದಲ್ಲೇ ಸಹಾರ ಸಂಸ್ಥೆಯ ಈ ನಿರ್ಧಾರ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.
ಮೂಲಗಳ ಪ್ರಕಾರ ಪುಣೆ ತಂಡದ ಪರವಾಗಿ ಆಡುತ್ತಿರುವ ಯುವರಾಜ್ ಸಿಂಗ್ ಗಾಯಗೊಂಡ ಹಿನ್ನಲೆಯಲ್ಲಿ ಬದಲಿ ಆಟಗಾರರನ್ನು ನೀಡಲು ಬಿಸಿಸಿಐ ಒಪ್ಪದೇ ಇರುವುದು ಸಹಾರ ಸಂಸ್ಥೆ ಪ್ರಾಯೋಜತ್ವಕ್ಕೆ ವಿದಾಯ ಹೇಳಲು ಪ್ರಮುಖ ಕಾರಣ ಎನ್ನಲಾಗಿದೆ.
ಬಿಸಿಸಿಐ ಮತ್ತು ಸಹಾರ ಸಂಸ್ಥೆ ನಡುವೆ ಹನ್ನೆರಡು ವರ್ಷಗಳ ಒಪ್ಪಂದ ನಡೆದಿತ್ತು. ಟೀಮ್ ಇಂಡಿಯಾ ಸದಸ್ಯರ ಉಡುಪಿನಲ್ಲಿ ತನ್ನ ಕಂಪೆನಿಯ ಲೋಗೋ ಕಾಣಿಸಿಕೊಳ್ಳುವುದಕ್ಕೆ ಸಹರಾ ಪ್ರತಿ ಪಂದ್ಯಕ್ಕೆ 3.34 ಕೋಟಿ ರೂಪಾಯಿ ಪಾವತಿಸುತ್ತಿತ್ತು.