ಬೆಂಗಳೂರು, ಫೆ.4: ಉದ್ಯಾನ ನಗರಿ ಬೆಂಗಳೂರಿನಲ್ಲಿ ಐಪಿಎಲ್ 5ನೇ ಆವೃತ್ತಿಗಾಗಿ ಕ್ರಿಕೆಟ್ ಕುದುರೆಗಳ ವ್ಯಾಪಾರ ಬಲು ಜೋರಾಗಿ ನಡೆಯುತ್ತಿದೆ. ಕೆಲವು ಕುದುರೆಗಳು ಲಕ್ಷಾಂತರ ಡಾಲರ್‍ಗೆ ಸೇಲಾದರೆ ಮತ್ತೆ ಕೆಲವರನ್ನು ಮೂಸಿ ನೋಡುವವರೇ ಗತಿ ಇಲ್ಲ. ಶನಿವಾರ (ಫೆ.4) ನಡೆದ ಐಪಿಎಲ್ 5 ಹರಾಜಿನ ಹೈಲೈಟ್ಸ್ ಹೀಗಿವೆ.
ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ವೇಗದ ಬೌಲರ್ ಆರ್ ವಿನಯ್ ಕುಮಾರ್ ಅವರು ಕಡೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪಾಲಾಗಿದ್ದಾರೆ. $1 ಮಿಲಿಯನ್‌ಗೆ ಅವರನ್ನು ಆರ್‌ಸಿಬಿ ಕೊಂಡುಕೊಂಡಿದೆ. ಆರ್ ಪಿ ಸಿಂಗ್ $600,000ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಶ್ರೀಶಾಂತ್ ಅವರನ್ನು ರಾಜಸ್ತಾನ್ ರಾಯಲ್ಸ್ $400,000ಗೆ ಅಪ್ಪಿಕೊಂಡಿದೆ. ರಮೇಶ್ ಪವರ್ ಅವರನ್ನು ಪಂಜಾಬ್ ತಂಡ $160,000 ಕೊಟ್ಟು ಖರೀದಿಸಿದೆ. ಭಾರತದ ವಿಆರ್‌ವಿ ಸಿಂಗ್, ಆಸ್ಟ್ರೇಲಿಯಾದ ವೇಗಿ ಸಿಡ್ಲ್, ನ್ಯೂಜಿಲ್ಯಾಂಡ್‌ನ ಟಿಮ್ ಸೌಥಿ, ದಕ್ಷಿಣ ಆಫ್ರಿಕಾದ ಫಿಲಾಂಡರ್, ವಿಂಡೀಸ್‌ನ ಫಿಡೆಲ್ ಎಡ್ವರ್ಡ್ಸ್, ರವಿ ರಾಮ್‌ಪೌಲ್ ಸೇಲಾಗದೆ ಉಳಿದ ಕುದುರೆಗಳು. ಸೇಲಾದ ಹಾಗೂ ಸೇಲಾಗದವರ ಪಟ್ಟಿ. (ದಟ್ಸ್ ಕ್ರಿಕೆಟ್)